ಎಲ್‌ವಿಟಿ ಎಂದರೆ ಎಂಡೋವೆನಿಯಸ್ ಲೇಸರ್ ಟ್ರೀಟ್‌ಮೆಂಟ್. ಲೇಸರ್ ಮೂಲಕ ಬಾಧಿತ ರಕ್ತನಾಳಗಳ ಒಳ ಭಾಗವನ್ನು ಬಿಸಿ ಮಾಡಿ ಬಾಧಿತ ನಾಳಗಳನ್ನು ಮುಚ್ಚುವ ಶಸ್ತ್ರಚಿಕಿತ್ಸೆ ಇದಾಗಿದೆ. ಸ್ಕ್ಲೆರೋಥೆರಪಿಯಂಥ ಸಾಂಪ್ರದಾಯಿಕ ಶಸ್ತ್ರಚಿಕಿತ್ಸೆ ವಿಧಾನಕ್ಕೆ ಹೋಲಿಸಿದರೆ ಲೇಸರ್ ಚಿಕಿತ್ಸೆ ಹೆಚ್ಚು ಸುರಕ್ಷಿತ. ಚಿಕಿತ್ಸೆ ನೀಡಿದ ಕೂಡಲೇ ರೋಗಿಗೆ ಉಪಶಮನ ಕಂಡುಬರುತ್ತದೆ.
ಶಸ್ತ್ರಚಿಕಿತ್ಸೆಗೆ ಮೊದಲು – Pre-surgery
- ಯಾವುದೇ ತೊಂದರೆ ಇಲ್ಲದಂತೆ ಸರಾಗವಾಗಿ ಶಸ್ತ್ರ ಚಿಕಿತ್ಸೆ ನೆರವೇರಿಸುವ ಉದ್ದೇಶದಿಂದ ಈ ಕೆಳಗಿನ ಕೆಲವು ಕ್ರಮಗಳನ್ನು ಪಾಲಿಸಲಾಗುವುದು:
- ಶಸ್ತ್ರ ಚಿಕಿತ್ಸೆಗೆ ಮೊದಲು ಯಾವುದೇ ರೀತಿಯ (ವಿಶೇಷವಾಗಿ ರಕ್ತ ತಿಳಿಯಾಗಿಸುವ) ಔಷಧ ಸೇವನೆ ನಿಲ್ಲಿಸುವಂತೆ ವೈದ್ಯರು ಸೂಚಿಸಬಹುದು.
- ಶಸ್ತ್ರಚಿಕಿತ್ಸೆಗೆ ಮೊದಲು ಬಾಧಿತ ಕಾಲಿನ ಮೇಲೆ ಹೆಚ್ಚು ಭಾರ/ ಒತ್ತಡ ಹಾಕಬಾರದು.
- ಶಸ್ತ್ರಚಿಕಿತ್ಸೆಗೆ ಕನಿಷ್ಠ 8 ತಾಸು ಮೊದಲು ರೋಗಿಯು ಯಾವುದೇ ರೀತಿಯ ಘನ ಆಹಾರ ಹಾಗೂ ದ್ರವಾಹಾರ ಸೇವಿಸಬಾರದು.
- ವಕ್ರ ಗೊಂಡು ಊದಿಕೊಂಡಿರುವ ರಕ್ತನಾಳಗಳನ್ನು ಗುರುತಿಸಲು ಸಣ್ಣ ಅಲ್ಟ್ರಾಸೌಂಡ್ ಉಪಕರಣದ ನೆರವಿನಿಂದ ಬಾಧಿತ ಭಾಗದ ಸ್ಕ್ಯಾನ್ ಮಾಡುವರು. ಮುಂದಿನ ಚಿಕಿತ್ಸೆ ನೀಡಲು ವೈದ್ಯರು ಈ ಪರೀಕ್ಷೆ ನಡೆಸುತ್ತಾರೆ.
ಶಸ್ತ್ರಚಿಕಿತ್ಸೆ – Laser Procedure for Varicose veins in Kannada
- ಈ ಶಸ್ತ್ರಚಿಕಿತ್ಸೆಯನ್ನು ಹೆಚ್ಚು ಕತ್ತರಿಸದೇ ಮಾಡಲಾಗುತ್ತೆ. ಸಣ್ಣ ಚಿಕಿತ್ಸೆಯಾದ್ದರಿಂದ ಆಸ್ಪತ್ರೆಯಲ್ಲಿ ಹೆಚ್ಚು ದಿನ ಇರಬೇಕಿಲ್ಲ. ಶಸ್ತ್ರಚಿಕಿತ್ಸೆ ವಿಧಾನ ಹೀಗಿದೆ ಓದಿ:
- ಚಿಕಿತ್ಸೆ ನೀಡುವ ಬಾಧಿತ ಭಾಗವಷ್ಟೇ ಮರಗಟ್ಟುವಂತೆ ಅರಿವಳಿಕೆ ನೀಡಲಾಗುತ್ತದೆ. ಆ ಭಾಗದ ಚರ್ಮವನ್ನು ನಂಜು ನಿರೋಧಕವಾಗಿಸಲಾಗುವುದು. ಬಾಧಿತ ನಾಳದೊಳಗೆ ವೈದ್ಯಕೀಯ ಉಪಕರಣ ತೂರಿಸಲಾಗುಲ್ಲದೆ. ಇದು 3 ಹಂತದ ಪ್ರಕ್ರಿಯೆ-
- 1. ಬಾಧಿತ ರಕ್ತನಾಳದೊಳಗೆ ಗೈಡ್ ವೈರ್ ಇರಿಸಲಾಗುತ್ತೆ. ಚಿಕಿತ್ಸೆ ನೀಡಬೇಕಿರುವ ಜಾಗ ತಲುಪಲು ಕ್ಯಾತಿಟರ್ (ತೂರುನಳಿಕೆ)ಗೆ ಮಾರ್ಗದರ್ಶನ ನೀಡುವುದೇ ಈ ಗೈಡ್ ವೈರ್ ಕೆಲಸ.
- 2. ಗೈಡ್ ವೈರ್ ನಿಗದಿತ ಸ್ಥಳ ತಲುಪಿದಾಗ ನಾಳದ ಸುತ್ತಲೂ ಪೊರೆ ಕೋಶ ಇರಿಸಿ, ಅದರ ಉದ್ದಕ್ಕೂ ಚಲಿಸುತ್ತದೆ.
- 3. ಪೊರೆ ಕೋಶ ಸಂಪೂರ್ಣವಾಗಿ ಗೈಡ್ ವೈರ್‌ಅನ್ನು ಆವರಿಸಿದ ನಂತರ, ವೈರ್‌ಅನ್ನು ನಿಧಾನವಾಗಿ ಹೊರತೆಗೆದು, ಲೇಸರ್ ಹರಿಸಲಾಗುವುದು.
- ಲೇಸರ್ ಕಿರಣದ ಶಾಖಕ್ಕೆ ನಾಳದ ಪದರ ಕುಸಿಯುತ್ತದೆ. ನಂತರ ನಿಧಾನವಾಗಿ ಬಾಧಿತ ನಾಳದಿಂದ ಉಪಕರಣವನ್ನು ಹಿಂದಕ್ಕೆ ಎಳೆಯಲಾಗುವುದರಿಂದ ನಾಳ ಮುಚ್ಚುತ್ತದೆ.
ಶಸ್ತ್ರಚಿಕಿತ್ಸೆ ನಂತರ ಆರೈಕೆ – Post surgical care in Kannada
- ಬಾಧಿತ ನಾಳದ ಚಿಕಿತ್ಸೆ ನಂತರ, ಪೊರೆ ಕೋಶ ಹಾಗೂ ಲೇಸರ್‌ಅನ್ನು ರೋಗಿಯ ದೇಹದಿಂದ ಹೊರ ತೆರೆಯಲಾಗುವುದು. ತಕ್ಷಣವೇ ನೋವಿನಿಂದ ಮುಕ್ತಿ ಪಡೆದ ಅನುಭವವಾಗುವುದು. ಈ ಪರಿಣಾಮವನ್ನು ಶಾಶ್ವತವಾಗಿಸುವ ನಿಟ್ಟಿನಲ್ಲಿ ವೈದ್ಯರು ನೀಡಲು ಸಲಹೆ ಸೂಚನೆಗಳನ್ನು ತಪ್ಪದೇ ಪಾಲಿಸಬೇಕು:
- ಶಸ್ತ್ರಚಿಕಿತ್ಸೆಯಾದ 2 ವಾರಗಳವರೆಗೆ ಕಂಪ್ರೆಷನ್ ಸ್ಟಾಕಿಂಗ್ಸ್ ಧರಿಸಬೇಕು. ಈ ರೀತಿ ಬಿಗಿ ಮಾಡುವುದರಿಂದ ಕಾಲಿನ ರಕ್ತ ನಾಳಗಳು ರಕ್ತವನ್ನು ಮೇಲ್ಮುಖವಾಗಿ ಹರಿಸಲು ನೆರವಾಗುತ್ತದೆ. ಸ್ಟಾಕಿಂಗ್ಸ್ ಹಾಕಿಕೊಳ್ಳುವುದರಿಂದ ಮತ್ತೆ ಸಮಸ್ಯೆ ಬಾಧಿಸುವುದಿಲ್ಲ.
- ನೋವು ನಿವಾರಣೆಗೆ ಮಾತ್ರೆಗಳನ್ನು ಬರೆದುಕೊಡುತ್ತಾರೆ.
- ಶಸ್ತ್ರಚಿಕಿತ್ಸೆಯಾದ ಭಾಗದಲ್ಲಿ ಸ್ವಲ್ಪ ಊತ ಕಾಣಿಸಿಕೊಳ್ಳಬಹುದು. ಹಾಗಾಗಿ ಶಸ್ತ್ರಚಿಕಿತ್ಸೆಯಾದ 2-3 ದಿನಗಳವರೆಗೆ ಆ ಭಾಗದ ಮೇಲೆ ಐಸ್ ಪ್ಯಾಕ್ ಇರಿಸಿ. ಊತ ಕಡಿಮೆ ಆಗುವುದು.