Kannada

How to Prevent Varicose Veins in Kannada

How to Prevent Varicose Veins in Kannada
by admin
10th January 2024
1 minute read

ಹೃದಯದಿಂದ ದೇಹದ ಭಾಗಗಳಿಗೆ ಶುದ್ಧ ರಕ್ತ ಹರಿಯುವುದು ಧಮನಿಯಾದರೆ, ದೇಹದ ಭಾಗಗಳಿಂದ ಅಶುದ್ಧ ರಕ್ತವನ್ನು ಹೃದಯಕ್ಕೆ ತರುವ ನಾಳಗಳು ಅಪಧಮನಿ. ಅಶುದ್ಧ ರಕ್ತವನ್ನು ಹೃದಯಕ್ಕೆ ಒಯ್ಯುವ ಅಪಧಮನಿಗಳು ಗುರುತ್ವಾಕಾಂಕ್ಷೆಗೆ ವಿರುದ್ಧವಾಗಿ ಕಾರ್ಯನಿರ್ವಹಿಸಬೇಕಾದ್ದರಿಂದ ಹೆಚ್ಚು ಕಾರ್ಯಕ್ಷಮತೆ ಹೊಂದಿರಬೇಕು. ಈ ನಾಳಗಳಲ್ಲಿನ ಕವಾಟಗಳು ರಕ್ತವು ಕಾಲುಗಳ ಕಡೆಗೆ ಜಾರಿಹೋಗದಂತೆ ತಡೆಯಲು ಹೆಚ್ಚು ಬಲಿಷ್ಠವಾಗಿರಬೇಕು.  ಕವಾಟಗಳ ಕ್ಷಮತೆ ಕ್ಷೀಣಿಸಿದಾಗ, ಹೃದಯದ ಕಡೆಗೆ ಹೋಗಬೇಕಾದ ಅಶುದ್ಧ ರಕ್ತ ವಿರುದ್ಧ ದಿಕ್ಕಿನಲ್ಲಿ ಜಾರುತ್ತದೆ. ಹೀಗಾದಾಗ ಕಾಲುಗಳಲ್ಲಿನ ಅಪಧಮನಿಗಳು ವಕ್ರವಾಗಿ ಊದಿಕೊಂಡಂತೆ ಕಾಣುತ್ತವೆ. ಈ ಸ್ಥಿತಿಗೆ ವೆರಿಕೋಸ್‌ ವೇನ್ಸ್ ಎನ್ನುತ್ತಾರೆ.

ತಡೆಗಟ್ಟುವುದು ಹೇಗೆ?:

  1. ವ್ಯಾಯಾಮ- ನಿಯಮಿತವಾಗಿ ವ್ಯಾಯಾಮ ಮಾಡುವುದರಿಂದ ವೆರಿಕೋಸ್‌ ವೇನ್ಸ್‌ ಸಮಸ್ಯೆಯಿಂದ ಪಾರಾಗಬಹುದು. ವ್ಯಾಯಾಮ ಮಾಡುವುದರಿಂದ ದೇಹದಲ್ಲಿ ರಕ್ತ ಚಲನೆ ಉತ್ತಮವಾಗುವುದು. ವ್ಯಕ್ತಿಯ ಆರೋಗ್ಯ ಸ್ಥಿತಿ ಉತ್ತಮವಾಗಿರುವುದು. ಚಟುವಟಿಕೆಯಿಂದ ಇರುವುದರಿಂದ ವಿಶೇಷವಾಗಿ ಕಾಲುಗಳ ಚಲನೆ ಇದ್ದರೆ, ರಕ್ತನಾಳಗಳಲ್ಲಿ ರಕ್ತ ನಿಲ್ಲುವುದು ಕಡಿಮೆ ಆಗುವುದು. ಈ ಮೂಲಕ ವೆರಿಕೋಸ್ ವೇನ್ಸ್‌ ಸಮಸ್ಯೆ ತಡೆಗಟ್ಟಬಹುದು.
  2. ಪಥ್ಯ- ಹೆಚ್ಚು ನಾರಿನಂಶ ಇರುವ ಆಹಾರ ಸೇವನೆ ಹಾಗೂ ಉಪ್ಪಿನ ಪ್ರಮಾಣ ಕಡಿಮೆ ಮಾಡುವುದರಿಂದ ವೇರಿಕೋಸ್ ವೇನ್ಸ್‌ ಸಮಸ್ಯೆಯನ್ನು ಸಾಧ್ಯವಾದ ಮಟ್ಟಿಗೆ ತಡೆಗಟ್ಟಬಹುದು. ರಕ್ತದಲ್ಲಿನ ಕಲ್ಮಶ (ನಾಳಗಳಲ್ಲಿ ಕಲ್ಮಶ ಶೇಖರಣೆಯಾದಾಗ ರಕ್ತ ಚಲನೆ ಕುಂಠಿತಗೊಳ್ಳಬಹುದು)  ವನ್ನು  ಹೊರಹಾಕಲು ಈ ರೀತಿಯ ಪಥ್ಯ ಪಾಲಿಸುವುದು ಉತ್ತಮ.  ಕಡಿಮೆ ಪ್ರಮಾಣದ ಉಪ್ಪು ಸೇವನೆಯಿಂದ ರಕ್ತದಲ್ಲಿನ ನೀರಿನ ಧಾರಣ ಕಡಿಮೆಯಾಗುವುದು. ಪರಿಣಾಮವಾಗಿ ರಕ್ತ ಸರಾಗವಾಗಿ ಹರಿಯುವುದು.
  3. ಕಂಪ್ರೆಷನ್ ಸ್ಟಾಕಿಂಗ್ಸ್- ಕಾಲನ್ನು ಬಿಗಿದು ಹಿಡಿಯುವ ಒತ್ತಡ ಉಂಟು ಮಾಡುವ ಸಾಕ್ಸ್‌ಗಳನ್ನು ಧರಿಸುವುದರಿಂದಲೂ ವೆರಿಕೋಸ್‌ ವೇನ್ಸ್‌ ಸಮಸ್ಯೆ ತಡೆಗಟ್ಟಬಹುದು. ಸ್ಟಾಕಿಂಗ್ಸ್‌ಗಳು ರಕ್ತನಾಳಗಳಲ್ಲಿ ರಕ್ತ ನಿಲ್ಲದಂತೆ ಮಾಡುವುದು ಇದರಿಂದ ರಕ್ತ ಚಲನೆ ಉಂಟಾಗುವುದು. ಮತ್ತೊಂದು ಮುಖ್ಯ ವಿಷಯ, ವೆರಿಕೋಸ್‌ ವೇನ್ಸ್‌ ಸಮಸ್ಯೆಯಿಂದ ಬಳಲುತ್ತಿರುವವರು ಯಾವುದೇ ಕಾರಣಕ್ಕೂ ಹೈ ಹೀಲ್ಸ್‌ ಚಪ್ಪಲಿ ಹಾಕಬಾರದು.  ರಕ್ತನಾಳಗಳಲ್ಲಿನ ಒತ್ತಡವನ್ನು ಇದು ಇನ್ನೂ ಹೆಚ್ಚು ಮಾಡಿ ಸಮಸ್ಯೆಯನ್ನು ಉಲ್ಬಣಗೊಳಿಸುತ್ತದೆ.