Kannada

ವೆರಿಕೋಸ್‌ ವೇನ್ಸ್‌ ಸಮಸ್ಯೆಯ ಕಾರಣ ಮತ್ತು ಲಕ್ಷಣಗಳು – Causes and symptoms of varicose veins in Kannada

ವೆರಿಕೋಸ್‌ ವೇನ್ಸ್‌ ಸಮಸ್ಯೆಯ ಕಾರಣ ಮತ್ತು ಲಕ್ಷಣಗಳು  – Causes and symptoms of varicose veins in Kannada
by admin
9th July 2019
1 minute read

ಹೃದಯದಿಂದ ದೇಹದ ಭಾಗಗಳಿಗೆ ಶುದ್ಧ ರಕ್ತ ಹರಿಯುವುದು ಧಮನಿಯಾದರೆ, ದೇಹದ ಭಾಗಗಳಿಂದ ಅಶುದ್ಧ ರಕ್ತವನ್ನು ಹೃದಯಕ್ಕೆ ತರುವ ನಾಳಗಳು ಅಪಧಮನಿ. ಅಶುದ್ಧ ರಕ್ತವನ್ನು ಹೃದಯಕ್ಕೆ ಒಯ್ಯುವ ಅಪಧಮನಿಗಳು ಗುರುತ್ವಾಕಾಂಕ್ಷೆಗೆ ವಿರುದ್ಧವಾಗಿ ಕಾರ್ಯನಿರ್ವಹಿಸುತ್ತವೆ.   ಹೃದಯ ಬಡಿತದ ನಡುವಿನ ಅರೆಗಳಿಗೆಯಲ್ಲಿ ಈ ಏಕಮುಖ ಕವಾಟಗಳು ರಕ್ತ ಹಿಮ್ಮುಖವಾಗಿ ಹರಿಯುವುದನ್ನು ತಡೆಯುವುದು. ಈ ಕಾರ್ಯ ನಿರ್ವಹಿಸಲು ಕವಾಟಗಳು ವಿಫಲವಾದಾಗ, ರಕ್ತ ಕಾಲು, ತೊಡೆ ಭಾಗಕ್ಕೆ ಹರಿದು ನಿಲ್ಲುವುದು. ಹೀಗಾದಾಗ ಕಾಲುಗಳಲ್ಲಿನ ಅಪಧಮನಿಗಳು ವಕ್ರವಾಗಿ ಊದಿಕೊಳ್ಳುತ್ತವೆ. ಇದೇ  ವೆರಿಕೋಸ್‌ ವೇನ್‌. 

ಕಾರಣಗಳು:

ವಯಸ್ಕರಲ್ಲಿ ಈ ಸಮಸ್ಯೆ ಸಾಮಾನ್ಯ. ಈ ಸಂದರ್ಭಗಳಲ್ಲಿ ಅಪಧಮನಿಗಳು ವಕ್ರವಾಗಿ ಊದಿಕೊಳ್ಳುವ ಸಾಧ್ಯತೆ ಹೆಚ್ಚು: 

  1. 1. ಗರ್ಭಾವಸ್ಥೆ: ಮಹಿಳೆಯರ ಮೂಲ ಹಾರ್ಮೋನ್‌  ಈಸ್ಟ್ರೋಜೆನ್‌. ಗರ್ಭಕೋಶ, ಯೋನಿ ಹಾಗೂ ಸ್ತನದ ಬೆಳವಣಿಗೆ, ನಿರ್ವಹಣೆ ಮಾಡುವ ಹಾರ್ಮೋನ್‌ ಇದಾಗಿದೆ.  ಗರ್ಭಾವಸ್ಥೆಯಲ್ಲಿ ಈ ಹಾರ್ಮೋನ್‌ ಪ್ರಮಾಣ ಹೆಚ್ಚುವುದರಿಂದ ವೇರಿಕೋಸ್‌ ವೇನ್ಸ್‌ ಕಾಣಿಸಿಕೊಳ್ಳಬಹುದು. ಈ ಹಾರ್ಮೋನ್ ರಕ್ತನಾಳದ ಪದರ ಹಿಗ್ಗಿ, ವಿಸ್ತರಿಸುತ್ತದೆ.  ಪರಿಣಾಮವಾಗಿ, ಕಾಲಿನ ನಾಗಳಗಳು ಉಬ್ಬಿ, ರಕ್ತ ಅಲ್ಲೇ ನಿಲ್ಲುತ್ತದೆ. 
  1. ಋತುಬಂಧ: ಮುಟ್ಟು ನಿಲ್ಲುವ ಸಂದರ್ಭದಲ್ಲಿ ಈಸ್ಟ್ರೋಜೆನ್‌  ಮತ್ತು ಪ್ರೊಜೆಸ್ಟರಾನ್ ಹಾರ್ಮೋನ್‌ಗಳ ಪ್ರಮಾಣ ಕುಸಿಯುತ್ತದೆ. ಇದರಿಂದಲೂ ರಕ್ತನಾಳದ ಪದರ ಹಿಗ್ಗಿ, ವಿಸ್ತರಿಸುತ್ತದೆ.  ಇದಲ್ಲದೇ, ವಯಸ್ಸಿನ ಕಾರಣದಿಂದ ಏಕ ಮುಖ ಕವಾಟುಗಳು ಹಿಂದಿನಂತೆ ಹೆಚ್ಚು ಸಮರ್ಥವಾಗಿ ಕಾರ್ಯನಿರ್ವಹಿಸದು. ಹಾಗಾಗಿ ರಕ್ತ ಚಲನೆ ಕಷ್ಟವಾಗಿ ಅಲ್ಲೆ ನಿಲ್ಲುತ್ತದೆ.
  1. ಹೆಚ್ಚು ಹೊತ್ತು ನಿಲ್ಲುವುದರಿಂದ:  ಬಹಳ ಹೊತ್ತು ನಿಂತಲ್ಲೇ ನಿಲ್ಲುವುದರಿಂದ ರಕ್ತ ನಾಳಗಳ ಮೇಲೆ ಒತ್ತಡ ಹೆಚ್ಚಾಗುವುದು, ಇದರಿಂದ ಮೇಲ್ಮುಖವಾಗಿ ರಕ್ತ ಚಲನೆ ಆಗುವುದಿಲ್ಲ. ಇದರಿಂದ ನಾಳಗಳು ಊದಿಕೊಂಡು ವೆರಿಕೋಸ್‌ ವೇನ್ಸ್‌ ಸಮಸ್ಯೆ ಕಾಡುವುದು. 
  2. ಬೊಜ್ಜು: ದೇಹದ ಭಾರ ಕಾಲಿನ ಮೇಲೆ ಹೆಚ್ಚು ಒತ್ತಡ ಹೇರುವುದರಿಂದಲೂ ವೆರಿಕೋಸ್‌ ವೇನ್ಸ್‌ ಸಮಸ್ಯೆ ಉಂಟಾಗುತ್ತದೆ. 
  1. ಅನುವಂಶಿಕ: ಕುಟುಂಬದಲ್ಲಿ ಯಾರಿಗಾದರೂ ಸಮಸ್ಯೆ ಇದ್ದಲ್ಲಿ ಅನುವಂಶಿಕವಾಗಿ ಈ ಸಮಸ್ಯೆ ಉಂಟಾಗಬಹುದು. 

ಲಕ್ಷಣಗಳು:

  • ವೇರಿಕೋಸ್‌ ವೇನ್ಸ್‌  ಮೊದಲಿಗೆ ಕಾಲಿನ ಅಂದ ಕೆಡಿಸುತ್ತವೆ.   ಕಾಲಿನ ನೋವು ಕಾಣಿಸಿಕೊಳ್ಳಬಹುದಾದರೂ, ವಕ್ರವಾಗಿ ಊದಿದ ನಾಳಗಳು ಎದ್ದು ಕಾಣುತ್ತವೆ. ಜತೆಗೆ ಈ ಕೆಲ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ:  
  • ನಾಳಗಳಲ್ಲಿ ರಕ್ತ ಕಟ್ಟಿಕೊಳ್ಳುವುದರಿಂದ  ಬಣ್ಣ ಬದಲಾದ ರಕ್ತನಾಳು ಬಲು ಬೇಗನೆ ಗಮನಕ್ಕೆ ಬರುತ್ತವೆ. ಸಾಮಾನ್ಯವಾಗಿ ಈ ನಾಳಗಳು ತಿರುಚಿ, ಉಂಡೆಯಾಗಿ ಕಾಣಿಸಿಕೊಳ್ಳುತ್ತವೆ.
  • ಇದಲ್ಲದೇ,  ಊತದಿಂದ ಕಾಲು ಭಾರ ಎನಿಸಬಹುದು. ಭಾದಿತ ಭಾಗದಲ್ಲಿ  ನೋವು, ಉರಿ ಊತ ಕಾಣಿಸಿಕೊಳ್ಳಬಹುದು.
  • ರೋಗ ಉಲ್ಬಣಗೊಂಡ ಹಾಗೂ ಅಪರೂಪದ ಪ್ರಕರಣಗಳಲ್ಲಿ.   ಅಲ್ಸರ್‌ ಆಗಿ ರಕ್ತನಾಳಗಳಿಂದ ರಕ್ತ ಸ್ರಾವವೂ ಆಗಬಹುದು.